Posts

Showing posts from July, 2026

*ರಿಷಬ್ ಶೆಟ್ಟಿ ಸಿನಿಮಾದಲ್ಲಿ ಬೆಳವಡಿ ಮಲ್ಲಮ್ಮ ತಾಯಿಯ ಐತಿಹಾಸಿಕ ವೀರ ಶೌರ್ಯ ಪರಾಕ್ರಮ ಎಲ್ಲೇಖ...✒️*

Image
 ವರದಿ: ಶಿವಾನಂದ್ ಕಿಲ್ಲೆದಾರ್    *ಹೌದು* :. ರಿಷಬ್ ಶೆಟ್ಟಿ ಸಿನಿಮಾದಲ್ಲಿ ಏನೇನಿದೆ ? ಮರಾಠ ಸಂಸ್ಥಾನದ ಸ್ಥಾಪಕ ದಕ್ಷ ಆಡಳಿತ ಹೋರಾಟಗಾರ ಸುಪ್ರಸಿದ್ಧ ದೀರ ಚಕ್ರವರ್ತಿ ಶಿವಾಜಿ ಮಹಾರಾಜನ ಸಾಲೂ ಸಾಲುಗಳಾಗಿ ಸಿನಿಮಾಗಳೂ ಬಂದಿವೆ ಆದರು ಸಹ ಆತನ ಮೇಲಿನ ಹಿಂದೂತ್ವ ಕ್ರೇಜ್ ಇಂಚಿಂಚು ಹೋಗಿಲ್ಲ ಐತಿಹಾಸಿಕ ಪುಟಗಳಲ್ಲಿ ರಾರಾಜಿಸಿದ ಹಿಂತಹ ಮಹಾನ ವೀರ ಪರಾಕ್ರಮ ಮೋಗಲರು ಹಾಗೂ ಬಿಜಾಪುರ ಸುಲ್ತಾನರು ವೀರರ ಜೊತೆ ನಡೆಸಿದ ಯುದ್ದಗಳು ತಮ್ಮ ಸಾಮ್ರಾಜ್ಯವನ್ನು ಕಟ್ಟಿದ್ದು ಹೇಗೆ ಹಿಂದೂ ಧರ್ಮವನ್ನು ಸಂರಕ್ಷಿಸುವುದು ಬಲಿದಾನಗಳ ಬಗ್ಗೆ ಎಷ್ಟು ಹೇಳಿದರು ಸಾಲದು ವೀರ ರಾಣಿ ಬೆಳವಡಿ ಮಲ್ಲಮ್ಮಾಳಿಗೂ ಛತ್ರಪತಿ ಶಿವಾಜಿಗೂ ಸಂಬಂಧವೇನು ? ಸಂಬಂಧ ಇದೆ ಅದುವೇ ಯುದ್ಧ ಅದು ಏನಂತೀರಾ ಬಿಡುಗಡೆ ಮಲ್ಲಮ್ಮನ ಪತಿರಾಯ ಈಶಪ್ರಭು ಮಾರಾಠರ ಯದ್ಧದ ಸಮಯದಲ್ಲಿ ಮರಣ ಹೊಂದುತ್ತಾನೆ ಮರಣ ಹೊಂದಿದ ನಂತರವೂ ಕೂಡ ಯುದ್ಧವನ್ನು ನಿಲ್ಲಿಸದೆ ವಿರಾವೇಶವಾಗಿ ಮಲ್ಲಮ್ಮ ತನ್ನ ಸಾಮ್ರಾಜ್ಯವನ್ನು ರಕ್ಷಣೆಗಾಗಿ ಮಹಿಳಾ ಸೈನ್ಯವನ್ನು ನಿರ್ಮಿಸಿ ನಿರಂತರವಾಗಿ ಹೋರಾಟ ನಡೆಸುತ್ತಾಳೆ ಆಕೆ ಶೌರ್ಯ ಪಾರಾಕ್ರಮ ಕಂಡು ಶಿವಾಜಿ ಮಹಾರಾಜ ಯುದ್ಧವನ್ನು ನಿಲ್ಲಿಸಿ ಆ ತಾಯಿಗೆ ಶರಣಾಗುತಾನೆ . ಆ ತಾಯಿಯನ್ನು ಗೌರವದಿಂದ ಕಾಣುತ್ತಾನೆ ಅನ್ನೋದು ಕೂಡ ಈ ಸಿನಿಮಾದಲ್ಲಿ ಅಚ್ಚು ಕಟ್ಟಾಗಿ ತೋರಿಸಲಾಗಿದೆ ಅಷ್ಟೇ ಅಲ್ಲದೆ ಯಾದವಾಡ ಹನುಮಾನ್ ಆಲಯದಲ್ಲಿ ಶಿವಾಜಿ ಮತ್ತ...

ಬೆಳಗಾವಿಯ ಕುಂದಾ ದೇವೇಗೌಡರ ಪತ್ನಿಯ 11ನೇ ದಿನದ ಪುಣ್ಯ ತಿಥಿ ಪೂಜಾ ಕಾರ್ಯಕ್ರಮಕ್ಕೆ.

Image
 ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಗುರುವಾರ ಭಾರತ ದೇಶದ ಮಾಜಿ ಪ್ರಧಾನ ಮಂತ್ರಿಗಳಾದಶ್ರೀ H. D.ದೇವೇಗೌಡರು ಅವರ ಧರ್ಮ ಪತ್ನಿವರಾದ ದಿವಂಗತ ಶ್ರೀಮತಿ ಶ್ರೀ ಚೆನ್ನಮ್ಮಜಿ ದೇವೇಗೌಡರು 11ನೇ ದಿನದ ಪುಣ್ಯ ತಿಥಿ ಪೂಜಾ ಕಾರ್ಯಕ್ರಮಕ್ಕೆ ಬೆಳಗಾವಿ ಜಿಲ್ಲೆಯಿಂದ ( ಕುಂದಾ ಸ್ವೀಟ್ ) ಜಾತ್ಯತೀತ ಜನತಾದಳ ಪಕ್ಷದ ಬೆಳಗಾವಿ ಜಿಲ್ಲಾಧ್ಯಕ್ಷರಾದಶ್ರೀ ಶಂಕರ ಭ ಮಾಡಲಗಿ ಇವರ ನೇತೃತ್ವದಲ್ಲಿ ( ಕುಂದಾ ಸ್ವೀಟ್) ಶ್ರೀ ದೇವೇಗೌಡರು ಕುಟುಂಬದಿಂದ ಪ್ರಸಾದ ವನ್ನು ಎಲ್ಲ ಗಣ್ಯ ಮಾನ್ಯರಿಗೆ ಪಕ್ಷದ ಮುಖಂಡರಿಗೆ ಮತ್ತು ಸಾರ್ವಜನಿಕರಿಗೆ ಹಂಚಿದರು

ಕಾರ್ಗಿಲ್ ವಿಜಯೋತ್ಸವದಲ್ಲಿ ಯೋಧರ ತ್ಯಾಗ ಅನನ್ಯ

Image
 ಪೋಟೋ ಶೀರ್ಷಿಕೆ-ಬೈಲಹೊಂಗಲ ನಗರದ ಶಿವಬಸವ ಕಲ್ಯಾಣ ಮಂಟಪದಲ್ಲಿ ನಡೆದ 27 ನೇಕಾರ್ಗೀಲ್ ವಿಜಯೋತ್ಸವ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ಬೈಲಹೊಂಗಲ-ಜಮ್ಮು-ಕಾಶ್ಮೀರದ ಕಾರ್ಗೀಲ್ ಪ್ರದೇಶದಲ್ಲಿ ನಡೆದ ಹೋರಾಟದಲ್ಲಿ ಅನೇಕ ಯೋಧರು ದೇಶ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟಿದ್ದು ಅಂಥವರು ಸಮಾಜದಲ್ಲಿ ಸದಾ ಸ್ಮರಣೀಯವಾಗಿದ್ದಾರೆಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು.   ಅವರು ನಗರದ ಶಿವಬಸವ ಕಲ್ಯಾಣ ಮಂಟಪದಲ್ಲಿ ತಾಲೂಕಾ ಮಾಜಿ ಸೈನಿಕರ ಸಮನ್ವಯ ಸಮೀತಿ ಅಡಿಯಲ್ಲಿ ರವಿವಾರ ನಡೆದ 27 ನೇ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ನಮ್ಮ ರಾಷ್ಟ್ರದ ಸೈನಿಕ ಇಲಾಖೆಯು ಇಡೀ ಜಗತ್ತಿಗೆ ಮಾದರಿಯಾಗಿದೆ. ಸ್ವದೇಶದ ಸ್ವಾಭಿಮಾನದ ಜೊತೆಗೆ ಕರ್ತವ್ಯ ಬದ್ದತೆ ಮೆರೆದ ಸಾಕಷ್ಟು ಸೈನಿಕರು ಪಾಣ ತ್ಯಾಗ ಮಾಡಿದ್ದಾರೆ. ವಿಜಯೋತ್ಸವ ಕಾರ್ಯದಲ್ಲಿ ಆ ಕುಟುಂಬಗಳ ಬಗ್ಗೆಯೂ ಚಿಂತನೆ ನಡೆಯಲಿ ಎಂದರು.    ನ್ಯಾಯವಾದಿ ಎಪ್.ಎಸ್.ಸಿದ್ದನಗೌಡರ ಮಾತನಾಡಿ, ಕಾರ್ಗೀಲ್ ಕಾರ್ಯಾಚರಣೆಯ ಮಹಾಯುದ್ದದಲ್ಲಿ ರಾಜ್ಯದ 13 ಸೈನಿಕರಲ್ಲಿ ಬೆಳಗಾವಿ ಜಿಲ್ಲೆಯ ಮೂವರು ಸೈನಿಕರು ಹುತಾತ್ಮರಾಗಿದ್ದಾರೆ. ದೇಶ ಸೇವೆಗಾಗಿ ತಮ್ಮ ಮಕ್ಕಳನ್ನು ಹೆತ್ತು ಜವಾಬ್ದಾರಿ ಮೆರೆದ ತಾಯಂದಿರ ಪಾತ್ರವೂ ಕೂಡಾ ಅತ್ಯಂತ ಮಹತ್ವದ್ದಾಗಿದೆ. ಯುವಕರು ಸೈನ್ಯ ಸೇರಿ ರಾಷ್ಟ್ರದ ಘಣತೆ ಹೆಚ್ಚಿಸಲು ಪ್ರಯತ್ನಿಸಬೇಕೆಂದರು. ...

ಕಾರ್ಗಿಲ್ ಯೋಧ ಮಡ್ಡೆಪ್ಪ ಕುರಬೇಟಗೆ ಸನ್ಮಾನ

 ಬೈಲಹೊಂಗಲ-ಕಾರ್ಗಿಲ್ ವಿಜಯ ದಿವಸದ ನಿಮಿತ್ತ ಬೈಲಹೊಂಗಲ ನಗರದ ಬಸವ ನಗರ 2 ನೇ ಅಡ್ಡರಸ್ತೆ, ಹೊಸೂರ ರೋಡ ನಿವಾಸಿಯಾದ, ಮಡ್ದೆಪ್ಪ ಮಲ್ಲಪ್ಪ ಕುರಬೇಟ ಮಾಜಿ ಸೈನಿಕರು ಭಾರತೀಯ ಭೂಸೇನೆ ಇವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ, ಜಾಗತಿಕ ಲಿಂಗಾಯತ ಮಹಾಸಭೆ ನಗರ ಘಟಕದ ಅಧ್ಯಕ್ಷರಾದ ಮಹೇಶ ವೀರಭದ್ರಪ್ಪ ಕೋಟಗಿ (ಉಡಿಕೇರಿ ), ಕನ್ನಡ ಜಾನಪದ ಪರಿಷತ್ತಿನ ಬೈಲಹೊಂಗಲ ತಾಲೂಕು ಘಟಕದ ಅಧ್ಯಕ್ಷರಾದ ಚಂದ್ರಶೇಖರ ರುದ್ರಪ್ಪ ಕೊಪ್ಪದ, ಶ್ರೀರಾಮ ವಧು -ವರರ ಅನ್ವೇಷಣೆ ಕೇಂದ್ರದ ರಾಜ್ಯ ಸಂಚಾಲಕರಾದ ಬಸವರಾಜ ಗೋವಿಂದಪ್ಪ ಬಡಿಗೇರ ಅವರು ಸನ್ಮಾನಿಸಿ ಅಭಿನಂದಿಸಿ, ಶುಭ ಕೋರಿದರು.  ಈ ಸಂದರ್ಭದಲ್ಲಿ ನೇಗಿನಹಾಳ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ ಶಿಕ್ಷಕಿಯರಾದ ಲಲಿತಾ ವೀರಭದ್ರಪ್ಪ ಕೋಟಗಿ,ಈಶ್ವರಿ ನಾಡಗೌಡ್ರ,ಕವಿತಾ ಬರಿಗಾಲ, ಅದೃಶಾನಂದ ಮಡ್ಡೆಪ್ಪ ಕುರುಬೆಟ್ಟ, ಪೂಜಾ ಅದೃಶಾನಂದ ಕುರುಬೆಟ್ಟ ಉಪಸ್ಥಿತರಿದ್ದರು.

ಬೈಲಹೊಂಗಲದಲ್ಲಿ 46ನೇ ರೈತ ಹುತಾತ್ಮ ದಿನಾಚರಣೆ

 ಕರುನಾಡ ರಕ್ಷಣಾ ವೇದಿಕೆಯ ಉತ್ತರ ಕರ್ನಾಟಕ ರೈತ ಘಟಕದ ರಾಜ್ಯಾಧ್ಯಕ್ಷ ಅಪ್ಪಾಸಾಹೇಬ ಲಕ್ಕುಂಡಿ, ಜಿಲ್ಲಾ ಸಂಚಾಲಕ ಆನಂದಗೌಡ ಪಾಟೀಲ ಮಾತನಾಡಿ, ದೇಶದ ಬೆನ್ನೆಲುಬು ರೈತರ ಸಂಕಷ್ಟಕ್ಕೆ ಸರಕಾರ ಸ್ಪಂದಿಸಬೇಕು. ಅವರ ಬೇಡಿಕೆಗಳನ್ನು ಶೀಘ್ರದಲ್ಲೇ ಈಡೇರಿಸಬೇಕು ಎಂದು ಆಗ್ರಹಿಸಿದರು. ರೈತರ ಆರ್ಥಿಕ ಸ್ಥಿತಿ ಸುಧಾರಿಸಲು ನೀರಾವರಿ ವ್ಯವಸ್ಥೆ ಬಲಪಡಿಸಬೇಕು. ಕೃಷಿ ಕ್ಷೇತ್ರಕ್ಕೆ ಅಗತ್ಯ ಮೂಲಸೌಕರ್ಯ, ಬೆಳೆಗಳಿಗೆ ಸೂಕ್ತ ಬೆಂಬಲ ಹಾಗೂ ರೈತರ ಹಿತ ಕಾಪಾಡುವ ಯೋಜನೆಗಳಿಗೆ ಆದ್ಯತೆ ನೀಡಬೇಕು ಎಂದರು. ಕಳಸಾ-ಬಂಡೂರಿ ಯೋಜನೆ ಜಾರಿಗೆ ಒತ್ತಾಯ: ಶಂಕರ ಬೋಳನ್ನವರ ಬೈಲಹೊಂಗಲ: ಕಳಸಾ-ಬಂಡೂರಿ ನಾಲಾ ಜೋಡಣೆ ಯೋಜನೆ ಜಾರಿಗೆ ಸರ್ಕಾರಗಳು ಪ್ರಾಮಾಣಿಕ ಕ್ರಮ ಕೈಗೊಳ್ಳಬೇಕು. ರೈತರ ಜೀವನದೊಂದಿಗೆ ಯಾವುದೇ ಸರ್ಕಾರಗಳು ಚೆಲ್ಲಾಟವಾಡಬಾರದು ಎಂದು ನೇಗಿಲ ಯೋಗಿ ರೈತ ಪರಿಶ್ರಮ ಸೇವಾ ಸಂಘದ ರಾಜ್ಯಾಧ್ಯಕ್ಷ ಶಂಕರ ಬೋಳನ್ನವರ ಆಗ್ರಹಿಸಿದರು. ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕರುನಾಡ ರಕ್ಷಣಾ ವೇದಿಕೆ ಹಾಗೂ ರೈತ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಡೆದ 46ನೇ ರೈತ ಹುತಾತ್ಮ ದಿನಾಚರಣೆ ಕಾರ್ಯಕ್ರಮ ಅಂಗವಾಗಿ ಉಚಿತ ಕಣ್ಣಿನ ತಪಾಸಣಾ ಶಿಬಿರ. ರೈತರಿಗೆ ಶಾಲು ವಿತರಣೆ ಹಾಗೂ ಸಸಿ ವಿತರಣೆ ಕಾರ್ಯಕ್ರಮದ ನೇತೃತ್ವವಹಿಸಿ ಅವರು ಮಾತನಾಡಿದರು. ಉತ್ತರ ಕರ್ನಾಟಕದ ರೈತರ ಬಹುದಿನಗಳ ಬೇಡಿಕೆಯಾಗಿರುವ ಕಳಸಾ-ಬಂಡೂರಿ ನಾಲಾ ಜೋಡಣೆ ಯೋಜನೆ ಅನುಷ್ಠಾನಗೊಂಡರೆ ಕೃಷಿ ಹ...

ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹಧನ ನೀಡಿ: ಮಾಜಿ ಸಿಂಡಿಕೇಟ್ ಸದಸ್ಯ ಪರಮೇಶ್ವರ್ ಕಾಳೆ ಆಗ್ರಹ

 ಧಾರವಾಡ ಜಿಲ್ಲೆಯ ಶಿವಳ್ಳಿ ಗ್ರಾಮದಲ್ಲಿ ಶ್ರೀ ದುರ್ಗಾದೇವಿ ಡೊಳ್ಳಿನ ಸಂಘ ಶಿವಳ್ಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ ಜಾನಪದ ವೈಭವ ರವಿವಾರದಂದು ಕನ್ನಡ ಸಾಹಿತ್ಯ ಭವನ ಆರ್ ಎನ್ ಶೆಟ್ಟಿ ಕ್ರೀಡಾಂಗಣ ಧಾರವಾಡದಲ್ಲಿ ನಡೆಯಿತು  ಉದ್ಘಾಟಕರಾಗಿ ಆಗಮದ ಮಾಜಿ ಸಿಂಡಿಕೇಟ್ ನ ಸದಸ್ಯರಾದ ಶ್ರೀಯುತ ಪರಮೇಶ್ವರ್ ಕಾಳೆ ಮಾತನಾಡಿ ಹಿರಿಯ ಕಲಾವಿದರಿಗೆ ನೀಡುತ್ತಿರುವ ಮಾಶಾಸನವನ್ನು ಹೆಚ್ಚಿಸಬೇಕು ಮತ್ತು ಸ್ಥಳೀಯ ಕಲಾವಿದರಿಗೆ ಕಲೆ ಮುಂದುವರಿಸಲು ಪ್ರೋತ್ಸಾಹದನ ನೀಡಬೇಕೆಂದು ಕರೆ ನೀಡಿದರು. ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಉತ್ತರ ಕರ್ನಾಟಕದ ಜಾನಪದ ಕಲಾವಿದರು ಕೂಟದ ಅಧ್ಯಕ್ಷರಾದ ಏಕೆರಪ್ಪ ನಡುವಿನಮನಿ, ಮುಖ್ಯ ಅತಿಥಿಗಳಾಗಿ ರಂಗಪ್ಪ ಲಕ್ಕನವರ್, ಹನುಮಂತಪ್ಪ ಲಕ್ಕನವರ್, ಮಂಜುನಾಥ್ ಹುಣಕಲ್ಲ, ವಿಠ್ಠಲ್ ಕಳಿಮಣಿ, ಪ್ರಕಾಶ್ ಕುಂದಗೋಳ ಉಪಸ್ಥಿತರಿದ್ದರು.

ದೇವೇಗೌಡರ ಪತ್ನಿ ಚೆನ್ನಮ್ಮ ನಿಧನಕ್ಕೆ ಸಂತಾಪ

 ಬೈಲಹೊಂಗಲ: ಮಾಜಿ ಪ್ರಧಾನಮಂತ್ರಿ ದೇವೇಗೌಡರ ಪತ್ನಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ತಾಯಿ ಚೆನ್ನಮ್ಮ ಅವರ ನಿಧನಕ್ಕೆ ಜೆಡಿಎಸ್‌ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಬೈಲಹೊಂಗಲ ತಾಲೂಕು ಅಧ್ಯಕ್ಷ ಸುಭಾಸ ಬಾಗೇವಾಡಿ, ಚನ್ನಮ್ಮನ ಕಿತ್ತೂರು ತಾಲೂಕಾಧ್ಯಕ್ಷ ಎಂ.ವೈ.ಸೋಮಣ್ಣವರ, ಯುವ ಘಟಕದ ಜಿಲ್ಲಾಧ್ಯಕ್ಷ ಸುನೀಲ ವರ್ಣೇಕರ, ಜಿಲ್ಲಾ ಉಪಾಧ್ಯಕ್ಷ ರಾಮು ರಜಪೂತ ಹಾಗೂ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಸಂತಾಪ ಸೂಚಿಸಿದ್ದು, ಅವರ ನಿಧನದಿಂದ ನಾಡಿಗೆ ತುಂಬಲಾರದ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.