ಬೈಲಹೊಂಗಲದಲ್ಲಿ 46ನೇ ರೈತ ಹುತಾತ್ಮ ದಿನಾಚರಣೆ

 ಕರುನಾಡ ರಕ್ಷಣಾ ವೇದಿಕೆಯ ಉತ್ತರ ಕರ್ನಾಟಕ ರೈತ ಘಟಕದ ರಾಜ್ಯಾಧ್ಯಕ್ಷ ಅಪ್ಪಾಸಾಹೇಬ ಲಕ್ಕುಂಡಿ, ಜಿಲ್ಲಾ ಸಂಚಾಲಕ ಆನಂದಗೌಡ ಪಾಟೀಲ ಮಾತನಾಡಿ, ದೇಶದ ಬೆನ್ನೆಲುಬು ರೈತರ ಸಂಕಷ್ಟಕ್ಕೆ ಸರಕಾರ ಸ್ಪಂದಿಸಬೇಕು. ಅವರ ಬೇಡಿಕೆಗಳನ್ನು ಶೀಘ್ರದಲ್ಲೇ ಈಡೇರಿಸಬೇಕು ಎಂದು ಆಗ್ರಹಿಸಿದರು. ರೈತರ ಆರ್ಥಿಕ ಸ್ಥಿತಿ ಸುಧಾರಿಸಲು ನೀರಾವರಿ ವ್ಯವಸ್ಥೆ ಬಲಪಡಿಸಬೇಕು. ಕೃಷಿ ಕ್ಷೇತ್ರಕ್ಕೆ ಅಗತ್ಯ ಮೂಲಸೌಕರ್ಯ, ಬೆಳೆಗಳಿಗೆ ಸೂಕ್ತ ಬೆಂಬಲ


ಹಾಗೂ ರೈತರ ಹಿತ ಕಾಪಾಡುವ ಯೋಜನೆಗಳಿಗೆ ಆದ್ಯತೆ ನೀಡಬೇಕು ಎಂದರು. ಕಳಸಾ-ಬಂಡೂರಿ ಯೋಜನೆ ಜಾರಿಗೆ ಒತ್ತಾಯ: ಶಂಕರ ಬೋಳನ್ನವರ


ಬೈಲಹೊಂಗಲ: ಕಳಸಾ-ಬಂಡೂರಿ ನಾಲಾ ಜೋಡಣೆ

ಯೋಜನೆ ಜಾರಿಗೆ ಸರ್ಕಾರಗಳು ಪ್ರಾಮಾಣಿಕ ಕ್ರಮ ಕೈಗೊಳ್ಳಬೇಕು. ರೈತರ ಜೀವನದೊಂದಿಗೆ ಯಾವುದೇ ಸರ್ಕಾರಗಳು ಚೆಲ್ಲಾಟವಾಡಬಾರದು ಎಂದು ನೇಗಿಲ ಯೋಗಿ ರೈತ ಪರಿಶ್ರಮ ಸೇವಾ ಸಂಘದ ರಾಜ್ಯಾಧ್ಯಕ್ಷ ಶಂಕರ ಬೋಳನ್ನವರ ಆಗ್ರಹಿಸಿದರು.

ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕರುನಾಡ ರಕ್ಷಣಾ ವೇದಿಕೆ ಹಾಗೂ ರೈತ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಡೆದ 46ನೇ ರೈತ ಹುತಾತ್ಮ ದಿನಾಚರಣೆ ಕಾರ್ಯಕ್ರಮ ಅಂಗವಾಗಿ ಉಚಿತ ಕಣ್ಣಿನ ತಪಾಸಣಾ ಶಿಬಿರ. ರೈತರಿಗೆ ಶಾಲು ವಿತರಣೆ ಹಾಗೂ ಸಸಿ ವಿತರಣೆ ಕಾರ್ಯಕ್ರಮದ ನೇತೃತ್ವವಹಿಸಿ ಅವರು ಮಾತನಾಡಿದರು.


ಉತ್ತರ ಕರ್ನಾಟಕದ ರೈತರ ಬಹುದಿನಗಳ ಬೇಡಿಕೆಯಾಗಿರುವ ಕಳಸಾ-ಬಂಡೂರಿ ನಾಲಾ ಜೋಡಣೆ ಯೋಜನೆ ಅನುಷ್ಠಾನಗೊಂಡರೆ ಕೃಷಿ ಹಾಗೂ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ. ರೈತರ ಹಿತದೃಷ್ಟಿಯಿಂದ ಸರ್ಕಾರಗಳು ತ್ವರಿತ ನಿರ್ಧಾರ ಕೈಗೊಂಡು ಯೋಜನೆ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.

ಸರ್ಕಾರಗಳು ರೈತರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಮತ್ತೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು. ರೈತರ ಸಮಸ್ಯೆಗಳಿಗೆ ಸ್ಪಂದಿಸುವುದು, ಕೃಷಿಗೆ ಅಗತ್ಯ ಸೌಲಭ್ಯ

ಒದಗಿಸುವುದು ಹಾಗೂ ರೈತರ ಬದುಕು ಸುಧಾರಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.

ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ ಮಾತನಾಡಿ, ರೈತರು ದೇಶದ ಬೆನ್ನೆಲುಬಾಗಿದ್ದು, ಅನ್ನ ನೀಡುವ ರೈತರ ಹಿತ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ರೈತರಿಗಾಗಿ ಹುತಾತ್ಮರಾದವರ ತ್ಯಾಗವನ್ನು ಮರೆಯಬಾರದು. 

ಬೈಲಹೊಂಗಲ ತಾಲೂಕಿನಲ್ಲಿ ಕೃಷಿ ಅಭಿವೃದ್ಧಿಗೆ ಪೂರಕವಾಗುವಂತೆ ಸಮಗ್ರ ನೀರಾವರಿ ಯೋಜನೆ ಜಾರಿಯಾಗಬೇಕು. ನೀರಿನ ಸಮಸ್ಯೆಯಿಂದ ರೈತರು ಸಂಕಷ್ಟ ಎದುರಿಸುತ್ತಿದ್ದು, ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವುದು ಅಗತ್ಯವಾಗಿದೆ. ಮುರಗೋಡ-

ಚಚಡಿ ಏತ ನೀರಾವರಿ ಯೋಜನೆ ಕಳೆದ ಎರಡು ದಶಕಗಳಿಂದ ಕಾಮಗಾರಿ ಮಂದಗತಿ ಸಾಗಿ. ಸಂಪೂರ್ಣವಾಗಿ ನಿಂತು ಹೋಗಿದೆ. ಈ ಯೋಜನೆ ಅನುಷ್ಠಾನಗೊಂಡರೆ ಸಾವಿರಾರು ಎಕರೆ ಭೂಮಿ ನೀರಾವರಿ ಹೊಂದಲಿದೆ ಎಂದರು.

ಪತ್ರಕರ್ತ ಮಹಾಂತೇಶ ತುರಮರಿ, ಕರುನಾಡು ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಮರಕುಂಬಿ, ನೀಲಾಂಬಿಕಾ ಪಾಟೀಲ, ಮಂಜುನಾಥ ಜಲ್ಲಿ, ನ್ಯಾಯವಾದಿಗಳಾದ ಬಿ.ಬಿ.ಹುಲಮನಿ. ಈರಣಗೌಡ ಪಾಟೀಲ, ಮುಖಂಡರಾದ ನಿಂಗಪ್ಪ ಪೋತಲಿ, ಹನಮಂತ ದೊಡ್ಡನವರ, ಈರಯ್ಯ ಪೂಜೇರಿ, ವಿಠಲ ಬಂಡಿವಡ್ಡರ, ಪರೀದಾ ನದಾಫ, ಬಸವರಾಜ ನುಗ್ಗಾನಟ್ಟಿ, ಗಾಯತ್ರಿ ಸುಲದಾಳ, ಸದಾಶಿವ ನಾವಿ, ಬಸವರಾಜ ಹೋಟಕರ. ಅಶೋಕ ಮತ್ತಿಕೊಪ್ಪ, ಪುಂಡಲೀಲ ಹೋಟಿ, ಜುಂಜಪ್ಪಾ ಪೂಜೇರಿ, ಮಹಾಂತೇಶ ಗುಂಡೂರ, ಶ್ರೀಕಾಂತ ಶಿರಹಟ್ಟಿ, ರಾಜು ಸಂಗೊಳ್ಳಿ ಸೇರಿದಂತೆ ನೂರಾರು ರೈತ ಮುಖಂಡರು, ಮಹಿಳಾ ಸಂಘದವರು, ಕರುನಾಡು ರಕ್ಷಣಾ ವೇದಿಕೆಯ ಕಾರ್ಯಕರ್ತರು ಉಪಸ್ಥಿತರಿದ್ದರು.


ಶಿಬಿರ: ಗೋದ್ ಪೌಂಡೇಶನ್ ಸಾಂಗ್ಲಿ, ಕುಲ್ಲೋಳ್ಳಿ ನೇತ್ರಾಲಯ ಸಾಂಗ್ಲಿ, ಕರುನಾಡ ರಕ್ಷಣಾ ವೇದಿಕೆ, ರೈತ ಸಂಘಟನೆಗಳ ಆಶ್ರಯದಲ್ಲಿ ರೈತ ಹುತಾತ್ಮ ದಿನಾಚರಣೆ ನಿಮಿತ್ತ ಪ್ರಥಮ ಬಾರಿಗೆ ಕಣ್ಣಿನ ತಪಾಸಣೆ ಹಾಗೂ ಬಿ.ಪಿ.- ಶುಗರ್ ಉಚಿತ ಶಿಬಿರದಲ್ಲಿ 202 ಜನ ಕಣ್ಣಿನ ತಪಾಸಣೆ, 204 ಬಿಪಿ, ಶುಗರ್ ಮತ್ತು 26 ಜನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ.

Comments

Popular posts from this blog

ಕನಸಿಗೆ ಬಡತನದ ತಡೆಯಿಲ್ಲ: ಕಠಿಣ ಪರಿಶ್ರಮದಿಂದ ವೈದ್ಯಕೀಯ ಸೀಟ್ ಪಡೆದ ವಿಜಯ್ ಕರಿಕಟ್ಟಿ

ಶ್ರೀ ಸುನೀಲ ವಣೇಕರ್ ಸಹಾಯ ಹಸ್ತ: ಬೈಲಹೊಂಗಲದ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಕೋರ್ಸ್ ಜೊತೆಗೆ ಆಕರ್ಷಕ ಬಹುಮಾನಗಳು!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಬದುಕುಳಿವಿಗೆ ಆಗ್ರಹಿಸಿ ಜೆಡಿಎಸ್ ಪ್ರತಿಭಟನೆ, ಶ್ರೀ ಸುನಿಲ್ ವರ್ಣೇಕರ್ ಭಾಗಿ