Posts

ಕನಸಿಗೆ ಬಡತನದ ತಡೆಯಿಲ್ಲ: ಕಠಿಣ ಪರಿಶ್ರಮದಿಂದ ವೈದ್ಯಕೀಯ ಸೀಟ್ ಪಡೆದ ವಿಜಯ್ ಕರಿಕಟ್ಟಿ

Image
 ಚಿತ್ರದುರ್ಗದ ಕೀರ್ತಿ ಪತಾಕೆ: ಕಷ್ಟದ ಹಾದಿ ತುಳಿದು ವೈದ್ಯಕೀಯ ಸೀಟ್ ಗಿಟ್ಟಿಸಿಕೊಂಡ ವಿಜಯ್ ಕರಿಕಟ್ಟಿ ಯಶಸ್ಸಿನ ಕಥೆ! ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದ ಸಾಮಾನ್ಯ ಕುಟುಂಬದ ಪ್ರತಿಭಾವಂತ ಯುವಕ ವಿಜಯ್ ವಿರುಪಾಕ್ಷ ಕರಿಕಟ್ಟಿ ಅವರು ನೀಟ್ (NEET) ಪರೀಕ್ಷೆಯಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸುವ ಮೂಲಕ ತಮ್ಮ ಊರಿಗೆ ಹಾಗೂ ಪೋಷಕರಿಗೆ ಹೆಮ್ಮೆ ತಂದಿದ್ದಾರೆ. ಶ್ರೀ ವಿರುಪಾಕ್ಷ ಮತ್ತು ಶ್ರೀಮತಿ ತಂಗೆಮ್ಮ ದಂಪತಿಗಳ ಸುಪುತ್ರರಾದ ವಿಜಯ್, ಹತ್ತಾರು ಸವಾಲುಗಳನ್ನು ಮೀರಿ ಈ ಸಾಧನೆ ಮಾಡಿದ್ದು, ಪ್ರಸ್ತುತ ಸಾಲಿನಲ್ಲಿ ಚಿತ್ರದುರ್ಗದ ಪ್ರತಿಷ್ಠಿತ 'ಚಿತ್ರದುರ್ಗ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್' (CIMS) ಕಾಲೇಜಿನಲ್ಲಿ ಎಂಬಿಬಿಎಸ್ (MBBS) ಸೀಟ್ ಪಡೆದುಕೊಂಡಿದ್ದಾರೆ. ನೀಟ್ ಅಂಕಗಳು: 720 ಅಂಕಗಳಿಗೆ 517 ಅಂಕಗಳನ್ನು ಗಳಿಸುವ ಮೂಲಕ ವಿಜಯ್ ಭರ್ಜರಿ ಪ್ರದರ್ಶನ ತೋರಿದ್ದಾರೆ. ರಾಕಿಂಗ್ (Ranking): ಅಖಿಲ ಭಾರತ ಮಟ್ಟದಲ್ಲಿ 68,941 ನೇ ರ‍್ಯಾಂಕ್ ಪಡೆದು ವೈದ್ಯಕೀಯ ಸೀಟ್ ಖಚಿತಪಡಿಸಿಕೊಂಡಿದ್ದಾರೆ. ಪಿಯುಸಿ ವಿದ್ಯಾಭ್ಯಾಸ: ಹುನ್ಸಿ ಹುಬ್ಬಳ್ಳಿಯ ಪ್ರೇರಣಾ ರೆಸಿಡೆನ್ಶಿಯಲ್ ಪಿಯು ಕಾಲೇಜಿನಲ್ಲಿ ತಮ್ಮ ಪದವಿಪೂರ್ವ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ದೃಢಸಂಕಲ್ಪ: ಮೊದಲ ಪ್ರಯತ್ನದಲ್ಲೇ ಯಶಸ್ಸು ಸಿಗದಿದ್ದರೂ ಎದೆಗುಂದದೆ, ಧಾರವಾಡದ 'ಎಕ್ಸಲೆಂಟ್ ನೀಟ್ ಅಕಾಡೆಮಿ'ಯಲ್ಲಿ ಲಾಂಗ್ ಟರ್ಮ್ (Long Term) ಕೋಚಿಂಗ್ ಪ...

ಪರೀಕ್ಷೆ ಬರೆದ 2 ಗಂಟೆಯೊಳಗೆ ರಿಸಲ್ಟ್ ಗ್ಯಾರಂಟಿ: ಬೈಲಹೊಂಗಲದಲ್ಲಿ ಬಡ ವಿದ್ಯಾರ್ಥಿಗಳಿಗೆ ಭರ್ಜರಿ ಬಂಪರ್!

Image
 ನನ್ನ ಜೀವನದ ಯಶಸ್ಸಿಗೆ ಗುರುಗಳೇ ಕಾರಣ. ಕಡು ಬಡತನದಿಂದ ಬೆಳೆದು ಬಂದಿರುವ ನನಗೆ ಗುರುಗಳ ಸತತ ಮಾರ್ಗದರ್ಶನ, ಪ್ರೇರಣೆ ಹಾಗೂ ಸಹಕಾರವೇ ಇಂದಿನ ಯಶಸ್ಸಿಗೆ ಕಾರಣವಾಗಿದೆ ಎಂದು ಜೆಡಿಎಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ಹಾಗೂ ಸಮಾಜ ಸೇವಕ ಸುನೀಲ ವರ್ಣೇಕರ ಹೇಳಿದರು. ಬೈಲಹೊಂಗಲ ಪಟ್ಟಣದ ಬಾಪೂಜಿ ಡ್ರೀಮ್ಸ್ ವಿಜ್ಞಾನ ಪ.ಪೂ. ಮಹಾವಿದ್ಯಾಲಯದ ಸಾಧುನವರ ಕಾಂಪ್ಲೆಕ್ಸ್‌ನಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಸುನೀಲ ವರ್ಣೇಕರ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ 100 ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ತರಬೇತಿ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು. ಸಮಾಜಕ್ಕೆ ಕೊಡುಗೆ ನೀಡಬೇಕೆಂಬ ಆಶಯದಿಂದ 100 ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಶಿಕ್ಷಣ ನೀಡುವ ಯೋಜನೆ ರೂಪಿಸಿ ಕಾರ್ಯರೂಪಕ್ಕೆ ತಂದಿದ್ದೇನೆ. ಕರ್ನಾಟಕದಾದ್ಯಂತ ಯಾವುದೇ ವಿದ್ಯಾರ್ಥಿಗೆ ಶಿಕ್ಷಣದ ಸಲುವಾಗಿ ತೊಂದರೆ ಎದುರಾದರೆ ಕೈಲಾದಷ್ಟು ಸಹಾಯ–ಸಹಕಾರ ನೀಡುವುದಾಗಿ ಹೇಳಿದರು. ಯುನಿಕ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ 100 ವಿದ್ಯಾರ್ಥಿಗಳ ತರಬೇತಿಯ ಸಂಪೂರ್ಣ ವೆಚ್ಚವನ್ನು ತಾವೇ ಭರಿಸುವುದಾಗಿ ತಿಳಿಸಿದ ಅವರು, ಮುಂದಿನ ದಿನಗಳಲ್ಲಿ ಇನ್ನಷ್ಟು ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಶಿಕ್ಷಣ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು. ಧಾರ್ಮಿಕ ದತ್ತಿ ಇಲಾಖೆಯ ನಿರ್ದೇಶಕ ಡಾ. ಮಹಾಂತೇಶಶಾಸ್ತ್ರೀ ಅರಾದ್ರಿಮಠ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂ...

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಜರುಗಿದ ಸಮೂಹ ಗೀತ ಗಾಯನ ಸ್ಪರ್ಧೆ.

Image
 ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಬೈಲಹೊಂಗಲ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಇದರ ಸಂಯುಕ್ತ ಆಶಯದಲ್ಲಿ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ 4 ಮತ್ತು ಬಿ ಆರ್ ಸಿ ಯಲ್ಲಿ *ತಾಲೂಕ ಹಂತದ ಸಮೂಹ ಗೀತ ಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು* ಬೈಲಹೊಂಗಲ ತಾಲೂಕಿನ ವಿವಿಧ ಶಾಲೆಗಳ ಶಾಲಾ ಹಂತದಲ್ಲಿ ಪ್ರಥಮ ಸ್ಥಾನ ಪಡೆದ ತಂಡಗಳು ತಾಲೂಕ ಹಂತದಲ್ಲಿ ಭಾಗವಹಿಸಿ ತಮ್ಮ ಗಾಯನವನ್ನು ಪ್ರಸ್ತುತಪಡಿಸಿದರು. ಕಪ್ಸ್ ಬುಲ್ ಬುಲ್, ಸ್ಕೌಟ್ಸ್ ಗೈಡ್ಸ್, ರೋವರ್ ಮತ್ತು ರೆಂಜರ ಮೂರು ವಿಭಾಗಗಳಲ್ಲಿ ತಾಲೂಕ ಹಂತದ ಸ್ಪರ್ಧೆಗಳನ್ನು ನಡೆಸಲಾಯಿತು. ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಸಾಹಿತಿಗಳು ಹಾಗೂ ಶಿಕ್ಷಕರ ಶ್ರೀ ಸಿದ್ದು ನೈಸರ್ಗಿ ಮತ್ತು ಸಂಗೀತ ವಿದ್ವಾಂಸ ಬಿ ಆರ್ ರಾಯನಾಯಕರ ಅವರು ಉದ್ಘಾಟಿಸಿದರು .ಮುಖ್ಯ ಅತಿಥಿಗಳಾಗಿ ಶ್ರೀಮತಿ ಆರ್ ಜೆ ಸಾಲಿ ಹಿರಿಯ ಶಿಕ್ಷಕಿಯರು ಭಾಗವಹಿಸಿದ್ದರು. ನಿರ್ಣಯಕರಾಗಿ ಶ್ರೀ ಬಿ ಆರ್ ರಾಯನಾಯ್ಕರ ಸಂಗೀತ ಶಿಕ್ಷಕರು ಮತ್ತು ವಿದ್ವಾಂಸರು ಹಾಗೂ ಸಂಗೀತ ಪಾಂಡಿತ್ಯವನ್ನು ಹೊಂದಿದ ಶ್ರೀ ಕುಮಾರ್ ಕಡೆಮನಿ ಮತ್ತು ಶ್ರೀ ವಿ.ಎಂ ಕುರಿ ಮತ್ತು ಶ್ರೀಮತಿ ಅರ್ಚನಾ ಕುಲಕರ್ಣಿ ಅವರು ನಿರ್ಣಾಯಕರಾಗಿ ಭಾಗವಹಿಸಿದ್ದರು. ಕಲ್ಪವೃಕ್ಷ ಶಾಲೆಯ ಬುಲ್ ಬುಲ್ ವಿದ್ಯಾರ್ಥಿನಿಯರು ಹಾಗೂ ಲಿಟಲ್ ಹಾರ್ಟ್ ಶಾಲೆಯ ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥ...

ಶ್ರೀ ಸುನೀಲ ವಣೇಕರ್ ಸಹಾಯ ಹಸ್ತ: ಬೈಲಹೊಂಗಲದ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಕೋರ್ಸ್ ಜೊತೆಗೆ ಆಕರ್ಷಕ ಬಹುಮಾನಗಳು!

Image
  ಈಗಿನ ಯುಗದಲ್ಲಿ ಕಂಪ್ಯೂಟರ್ ಜ್ಞಾನ ಪ್ರತಿಯೊಬ್ಬ ವಿದ್ಯಾರ್ಥಿಗೂ ಅತ್ಯಗತ್ಯ. ಆದರೆ ಗ್ರಾಮೀಣ ಭಾಗದ ಅಥವಾ ಬಡ ಪ್ರತಿಭಾವಂತ ಮಕ್ಕಳಿಗೆ ಆರ್ಥಿಕ ಸಮಸ್ಯೆಯಿಂದ ಉತ್ತಮ ಕಂಪ್ಯೂಟರ್ ಶಿಕ್ಷಣ ಸಿಗುವುದಿಲ್ಲ. ನಮ್ಮ ಬೈಲಹೊಂಗಲದ ಯುವಕರಿಗೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಮತ್ತು ಅವರ ಭವಿಷ್ಯಕ್ಕೆ ಅಡಿಪಾಯ ಹಾಕಿಕೊಡಲು ಈ ಚಿಕ್ಕ ಪ್ರಯತ್ನ ಮಾಡಿದ್ದೇವೆ. ಶಿಕ್ಷಕರ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ವಿದ್ಯೆಗಿಂತ ದೊಡ್ಡ ಗುರುವಿನ ಕಾಣಿಕೆ ಬೇರೆ ಇರಲು ಸಾಧ್ಯವಿಲ್ಲ." ಇದೇ ಬರುವ ಸೆಪ್ಟೆಂಬರ್ 06, ರಂದು ಬೆಳಿಗ್ಗೆ 10:00 ಗಂಟೆಗೆ ಬಾಪೂಜಿ ಡ್ರೀಮ್ಸ್ ವಿಜ್ಞಾನ ಪ.ಪೂ ಮಹಾವಿದ್ಯಾಲಯದ ಸಾಧುನವರ ಕಾಂಪ್ಲೆಕ್ಸ್‌ನಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ. ಇದಕ್ಕೆ ಕೇವಲ 50 ರೂಪಾಯಿಗಳ ಅತ್ಯಲ್ಪ ಪ್ರವೇಶ ಶುಲ್ಕ ಇರುತ್ತದೆ. ವಿಶೇಷವೆಂದರೆ, ಪರೀಕ್ಷೆ ಮುಗಿದ ಕೇವಲ 2 ಗಂಟೆಯೊಳಗೆ ಫಲಿತಾಂಶ ಪ್ರಕಟಿಸಿ, ಆಯ್ಕೆಯಾದ 100 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಂದೇ ಘೋಷಿಸುತ್ತೇವೆ." ಪರೀಕ್ಷೆಯಲ್ಲಿ ತೇರ್ಗಡೆಯಾಗುವ 100 ವಿದ್ಯಾರ್ಥಿಗಳಲ್ಲಿ ಅತ್ಯುತ್ತಮ ಪ್ರತಿಭೆ ತೋರುವ ಅಗ್ರ ಮೂವರಿಗೆ ವಿಶೇಷ ಬಹುಮಾನಗಳಿವೆ. ಪ್ರಥಮ ಸ್ಥಾನ ಪಡೆದವರಿಗೆ ಸಂಪೂರ್ಣ ಕಂಪ್ಯೂಟರ್ ಸೆಟ್, ದ್ವಿತೀಯ ಸ್ಥಾನ ಪಡೆದವರಿಗೆ ಟ್ಯಾಬ್ (Tablet), ಮತ್ತು ತೃತೀಯ ಸ್ಥಾನ ಪಡೆದವರಿಗೆ ಸ್ಮಾರ್ಟ್ ವಾಚ್ ನೀಡಲಾಗುವುದು. ಹಾಗೆಯೇ ಕೋರ್ಸ್ ...

ಸಾಮಾಜಿಕ ಸಮಾನತೆಯ ಹರಿಕಾರ ಡಿ. ದೇವರಾಜ ಅರಸು ಬಡವರ ಬಂಧು ಎಂದೆಂದಿಗೂ ಅಮರ

Image
 ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ & ಮಹಾನಗರ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ ಗುರವಾರ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ನಡೆದ ಡಿ. ದೇವರಾಜ ಅರಸು 111 ನೇ ಜನ್ಮದಿನಾಚರಣೆ ಅದ್ದೂರಿಯಾಗಿ ಜರುಗಿತು.  ಇದಕ್ಕೂ ಮುಂಚೆ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಭವ್ಯ ಮೆರವಣಿಗೆ ಕಾರ್ಯಕ್ರಮ: ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ದಿವಂಗತ ಡಿ.ದೇವರಾಜ ಅರಸು ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿಗಳಾದ ಮೊಹಮ್ಮದ ರೋಷನ್, ಬೆಳಗಾವಿ ಪೊಲೀಸ್ ಆಯುಕ್ತ ಗುಲಾಬ್ ರಾವ್ ಭೂಷಣ ಬೊರಸೆ, ಅವರು ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಿ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು. ದಿವಂಗತ ಡಿ. ದೇವರಾಜ ಅರಸು ಅವರು ಅಧಿಕಾರವನ್ನು ಕೇವಲ ಆಡಳಿತಕ್ಕೆ ಸೀಮಿತಗೊಳಿಸದೆ ಸಮಾಜದ ಸುಧಾರಣೆಗೆ ಶ್ರಮಿಸಿದ ಬಡವರ ಬಂದು ಜನಪರ ನಾಯಕರಾಗಿದ್ದರು ಎಂದು ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ ಹೇಳಿದರು. ಉಪನ್ಯಾಸಕರಾಗಿ ಆಗಮಿಸಿದ್ದ ಡಾ. ಪ್ರವೀಣಾ ಕೆಎಸ್ ಅವರು ಮಾತನಾಡಿ ನಾಡು ಕಂಡ ಶ್ರೇಷ್ಠ ಮುಖ್ಯಮಂತ್ರಿ ದೇವರಾಜ ಅರಸು ಕೇವಲ ಹೆಸರಿಗೆ ಮಾತ್ರವಲ್ಲದೆ ಸಾಮಾನ್ಯ ಜನರಿಗೆ ನಿಜವಾದ ಅರಸರಾಗಿದ್ದರು, ಸಮಾಜದಲ್ಲಿ ತುಳಿತಕ್ಕೆ ಒಳಗಾದ ಅನೇಕ ಜನರನ್ನು ಸುಧಾರಿಸಲು ಅನೇಕ ಸಾಮಾಜಿಕ ಸುಧಾರಣಾ ಕಾರ್ಯಗಳನ್ನು ಜಾರಿ ಮಾಡಿದಾರೆ ಎಂದರು. ಡಿ.ದೇವರಾಜ ಅರಸು ಅವರು ಸೈನ್ಯಕ್ಕೆ ಸೇರಲು ಬಯಸಿದ ಅವರು ತಾಯಿಯ ಕಾರಣ ಪ...

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಬದುಕುಳಿವಿಗೆ ಆಗ್ರಹಿಸಿ ಜೆಡಿಎಸ್ ಪ್ರತಿಭಟನೆ, ಶ್ರೀ ಸುನಿಲ್ ವರ್ಣೇಕರ್ ಭಾಗಿ

Image
  ಟೌನ್‌ಶಿಪ್‌ ಯೋಜನೆ: ರೈತರ ಬದುಕುಳಿವಿಗೆ ಆಗ್ರಹಿಸಿ ಜೆಡಿಎಸ್ ಪ್ರತಿಭಟನೆ, ಶ್ರೀ ಸುನಿಲ್ ವರ್ಣೇಕರ್ ಭಾಗಿ.                    ಅಭಿವೃದ್ಧಿ ಹೆಸರಲ್ಲಿ ರೈತರ ಮರಣಶಾಸನ  ರಿಯಲ್ ಎಸ್ಟೇಟ್ ಮಾಫಿಯಾ ಮಾಡಲು ರಾಜ್ಯ ಸರ್ಕಾರ ಬಿಡದಿ ಟೌನ್ ಶಿಪ್ ಯೋಜನೆ ಹೆಸರಿನಲ್ಲಿ ರೈತರ ಫಲವತ್ತಾದ ಭೂಮಿಯನ್ನು ಕಸಿಯುತ್ತಿದೆ. ಅಭಿವೃದ್ಧಿ ಹೆಸರಲ್ಲಿ ರೈತರ ಮರಣಶಾಸನ ಬರೆಯಲು ಕಾಂಗ್ರೆಸ್ ಸರ್ಕಾರ ಹೊರಟಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಕನಸಿನ ಕೂಸು ಎಂಬ ಸಚಿವ ಎಚ್.ಸಿ.ಬಾಲಕೃಷ್ಣ ಅವರ ಹೇಳಿಕೆಗೆ ತಿರುಗೇಟು ನೀಡಿದ ನಿಖಿಲ್ ಕುಮಾರಸ್ವಾಮಿ, 2006 ರಲ್ಲಿ ಯೋಜನೆ ಪ್ರಸ್ತಾಪವಾದಾಗ ಕುಮಾರಸ್ವಾಮಿ ಅವರು ರೈತರೊಂದಿಗೆ ಮೂರು ಸಭೆ ನಡೆಸಿದರು. ರೈತ ಮಹಿಳೆಯೊಬ್ಬರು ವಿರೋಧಿಸಿದಾಗ 2007ರ ಆ.1 ರಂದು ವಿಧಾನಸಭೆಯಲ್ಲಿ ಯೋಜನೆ ಕೈಬಿಟ್ಟಿರುವುದಾಗಿ ಘೋಷಿಸಿದರು. ಅದರ ದಾಖಲೆ ಇಂದಿಗೂ ಇದೆ. ಆದ್ದರಿಂದ ಇದು ಕುಮಾರಸ್ವಾಮಿ ಅವರ ಕೂಸಲ್ಲ. ಹೀಗಾಗಿ ಒತ್ತಾಯಪೂರ್ವಕವಾಗಿ ರೈತರಿಂದ ಭೂಸ್ವಾಧೀನ ಮಾಡಿಕೊಳ್ಳುವುದನ್ನು ಕೈಬಿಡಬೇಕು ಎಂದು ನಿಖಿಲ್ ಆಗ್ರಹಿಸಿದರು. ನಗರದ ಫ್ರೀಡಂ ಪಾರ್ಕ್‌ನಲ್ಲಿ ಮಂಗಳವಾರ ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ನಡೆದ ಪಕ್ಷದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ 4 ಶಾಸಕರಿಗೆ ಆಶೀರ್ವಾದ ಮಾಡಿ ...

ಕೊಟ್ಟ ಮಾತಿನಂತೆ ಯರಗೊಪ್ಪ ಮಠದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ: ಶಾಸಕ ಬಾಬಾಸಾಹೇಬ ಪಾಟೀಲ

Image
 ದೇವರಕೊಂಡ ಚನ್ನವೃಷಬೇಂದ್ರ ಅಜ್ಜನ ಮಠದ ಅಭಿವೃದ್ದಿಗೆ ಸದ್ಭಕ್ತರ ಸಹಕಾರ ಅಗತ್ಯವಾಗಿದೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.     ಅವರು ಮಂಗಳವಾರ ಬೈಲಹೊಂಗಲ ಸಮೀಪದ ಕಿತ್ತೂರು ಮತಕ್ಷೇತ್ರದ ಯರಗೊಪ್ಪ ಗ್ರಾಮದ ಶ್ರೀ ಚನ್ನವೃಷಬೇಂದ್ರ ದೇವರಕೊಂಡ ಅಜ್ಜನವರ ಲೀಲಾಮಠದಲ್ಲಿ ಪಂಚಾಯತ ರಾಜ್ಯ ಇಂಜನೀಯರಿಂಗ್ ಇಲಾಖೆ 2025-26 ನೇ ಸಾಲಿನ ಲೆಕ್ಕ ಶೀರ್ಷಿಕೆ 54-52 ಟೂರಿಸಂ ಯೋಜನೆಯಡಿಯಲ್ಲಿ ಸುಮಾರು 50 ಲಕ್ಷ ರೂಪಾಯಿಗಳ ಅನುಧಾನದಲ್ಲಿ ಯಾತ್ರಿ ನಿವಾಸ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ನಾನು ಕೊಟ್ಟ ಮಾತಿನಂತೆ ಶ್ರೀಮಠದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಸರಕಾರದಿಂದ ಅನುದಾನ ತಂದು ಶ್ರಮಿಸುತ್ತಿದ್ದು ಇನ್ನೂ ಹೆಚ್ಚಿನ ಅಭಿವೃದ್ದಿಗೆ ಮಠದ ಸದ್ಭಕ್ತರು ತನು-ಮನ-ಧನ ಸಹಾಯ ಮಾಡಲು ಮುಂದೆ ಬರಬೇಕೆಂದು ಮನವಿ ಮಾಡಿದರು.   ದಿವ್ಯ ಸಾನಿಧ್ಯ ವಹಿಸಿದ ಲೀಲಾಮಠದ ನಿತ್ಯಾನಂದ (ಶಿವಪ್ಪಜ್ಜ) ಆಶೀರ್ವಚನ ನೀಡಿ ಮಾತನಾಡಿ, ಶಾಸಕ ಬಾಬಾಸಾಹೇಬ ಪಾಟೀಲ ಅವರು ಶ್ರೀಮಠದ ಸದ್ಭಕ್ತರಾಗಿದ್ದು ಅವರ ಪರಿಶ್ರಮದ ಅಂಗವಾಗಿ ಶ್ರೀಮಠದ ಅಭಿವೃದ್ದಿಗೆ ಸರಕಾರದಿಂದ 50 ಲಕ್ಷ ರೂಪಾಯಿಗಳ ಅನುಧಾನದಲ್ಲಿ ಯಾತ್ರಿ ನಿವಾಸ ನಿರ್ಮಾಣಕ್ಕೆ ಭೂಮಿ ಪೂಜಾ ಕಾರ್ಯ ಕೈಗೊಂಡಿದ್ದು ಶ್ಲಾಘಣೀಯವಾಗಿದೆ ಎಂದರು.    ಈ ಸಂದರ್ಭದಲ್ಲಿ ವೇ.ಮೂ.ಮಲ್ಲಿಕಾರ್ಜುನ ಹಿರೇಮಠ, ಜಕನಾಯ್ಕನಕೊಪ್ಪದ ದೇವರಕೊಂಡ ಅಜ್ಜನವರ ಮಠದ ಮಾತೋಶ್ರೀ ...