ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹಧನ ನೀಡಿ: ಮಾಜಿ ಸಿಂಡಿಕೇಟ್ ಸದಸ್ಯ ಪರಮೇಶ್ವರ್ ಕಾಳೆ ಆಗ್ರಹ

 ಧಾರವಾಡ ಜಿಲ್ಲೆಯ ಶಿವಳ್ಳಿ ಗ್ರಾಮದಲ್ಲಿ ಶ್ರೀ ದುರ್ಗಾದೇವಿ ಡೊಳ್ಳಿನ ಸಂಘ ಶಿವಳ್ಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ ಜಾನಪದ ವೈಭವ ರವಿವಾರದಂದು ಕನ್ನಡ ಸಾಹಿತ್ಯ ಭವನ ಆರ್ ಎನ್ ಶೆಟ್ಟಿ ಕ್ರೀಡಾಂಗಣ ಧಾರವಾಡದಲ್ಲಿ ನಡೆಯಿತು 

ಉದ್ಘಾಟಕರಾಗಿ ಆಗಮದ ಮಾಜಿ ಸಿಂಡಿಕೇಟ್ ನ ಸದಸ್ಯರಾದ ಶ್ರೀಯುತ ಪರಮೇಶ್ವರ್ ಕಾಳೆ ಮಾತನಾಡಿ ಹಿರಿಯ ಕಲಾವಿದರಿಗೆ ನೀಡುತ್ತಿರುವ ಮಾಶಾಸನವನ್ನು ಹೆಚ್ಚಿಸಬೇಕು ಮತ್ತು ಸ್ಥಳೀಯ ಕಲಾವಿದರಿಗೆ ಕಲೆ ಮುಂದುವರಿಸಲು ಪ್ರೋತ್ಸಾಹದನ ನೀಡಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಉತ್ತರ ಕರ್ನಾಟಕದ ಜಾನಪದ ಕಲಾವಿದರು ಕೂಟದ ಅಧ್ಯಕ್ಷರಾದ ಏಕೆರಪ್ಪ ನಡುವಿನಮನಿ, ಮುಖ್ಯ ಅತಿಥಿಗಳಾಗಿ ರಂಗಪ್ಪ ಲಕ್ಕನವರ್, ಹನುಮಂತಪ್ಪ ಲಕ್ಕನವರ್, ಮಂಜುನಾಥ್ ಹುಣಕಲ್ಲ, ವಿಠ್ಠಲ್ ಕಳಿಮಣಿ, ಪ್ರಕಾಶ್ ಕುಂದಗೋಳ ಉಪಸ್ಥಿತರಿದ್ದರು.

Comments

Popular posts from this blog

ಕನಸಿಗೆ ಬಡತನದ ತಡೆಯಿಲ್ಲ: ಕಠಿಣ ಪರಿಶ್ರಮದಿಂದ ವೈದ್ಯಕೀಯ ಸೀಟ್ ಪಡೆದ ವಿಜಯ್ ಕರಿಕಟ್ಟಿ

ಶ್ರೀ ಸುನೀಲ ವಣೇಕರ್ ಸಹಾಯ ಹಸ್ತ: ಬೈಲಹೊಂಗಲದ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಕೋರ್ಸ್ ಜೊತೆಗೆ ಆಕರ್ಷಕ ಬಹುಮಾನಗಳು!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಬದುಕುಳಿವಿಗೆ ಆಗ್ರಹಿಸಿ ಜೆಡಿಎಸ್ ಪ್ರತಿಭಟನೆ, ಶ್ರೀ ಸುನಿಲ್ ವರ್ಣೇಕರ್ ಭಾಗಿ