ಶ್ರೀ ಸುನೀಲ ವಣೇಕರ್ ಸಹಾಯ ಹಸ್ತ: ಬೈಲಹೊಂಗಲದ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಕೋರ್ಸ್ ಜೊತೆಗೆ ಆಕರ್ಷಕ ಬಹುಮಾನಗಳು!

 

ಈಗಿನ ಯುಗದಲ್ಲಿ ಕಂಪ್ಯೂಟರ್ ಜ್ಞಾನ ಪ್ರತಿಯೊಬ್ಬ ವಿದ್ಯಾರ್ಥಿಗೂ ಅತ್ಯಗತ್ಯ. ಆದರೆ ಗ್ರಾಮೀಣ ಭಾಗದ ಅಥವಾ ಬಡ ಪ್ರತಿಭಾವಂತ ಮಕ್ಕಳಿಗೆ ಆರ್ಥಿಕ ಸಮಸ್ಯೆಯಿಂದ ಉತ್ತಮ ಕಂಪ್ಯೂಟರ್ ಶಿಕ್ಷಣ ಸಿಗುವುದಿಲ್ಲ. ನಮ್ಮ ಬೈಲಹೊಂಗಲದ ಯುವಕರಿಗೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಮತ್ತು ಅವರ ಭವಿಷ್ಯಕ್ಕೆ ಅಡಿಪಾಯ ಹಾಕಿಕೊಡಲು ಈ ಚಿಕ್ಕ ಪ್ರಯತ್ನ ಮಾಡಿದ್ದೇವೆ. ಶಿಕ್ಷಕರ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ವಿದ್ಯೆಗಿಂತ ದೊಡ್ಡ ಗುರುವಿನ ಕಾಣಿಕೆ ಬೇರೆ ಇರಲು ಸಾಧ್ಯವಿಲ್ಲ."

ಇದೇ ಬರುವ ಸೆಪ್ಟೆಂಬರ್ 06, ರಂದು ಬೆಳಿಗ್ಗೆ 10:00 ಗಂಟೆಗೆ ಬಾಪೂಜಿ ಡ್ರೀಮ್ಸ್ ವಿಜ್ಞಾನ ಪ.ಪೂ ಮಹಾವಿದ್ಯಾಲಯದ ಸಾಧುನವರ ಕಾಂಪ್ಲೆಕ್ಸ್‌ನಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ. ಇದಕ್ಕೆ ಕೇವಲ 50 ರೂಪಾಯಿಗಳ ಅತ್ಯಲ್ಪ ಪ್ರವೇಶ ಶುಲ್ಕ ಇರುತ್ತದೆ. ವಿಶೇಷವೆಂದರೆ, ಪರೀಕ್ಷೆ ಮುಗಿದ ಕೇವಲ 2 ಗಂಟೆಯೊಳಗೆ ಫಲಿತಾಂಶ ಪ್ರಕಟಿಸಿ, ಆಯ್ಕೆಯಾದ 100 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಂದೇ ಘೋಷಿಸುತ್ತೇವೆ."

ಪರೀಕ್ಷೆಯಲ್ಲಿ ತೇರ್ಗಡೆಯಾಗುವ 100 ವಿದ್ಯಾರ್ಥಿಗಳಲ್ಲಿ ಅತ್ಯುತ್ತಮ ಪ್ರತಿಭೆ ತೋರುವ ಅಗ್ರ ಮೂವರಿಗೆ ವಿಶೇಷ ಬಹುಮಾನಗಳಿವೆ. ಪ್ರಥಮ ಸ್ಥಾನ ಪಡೆದವರಿಗೆ ಸಂಪೂರ್ಣ ಕಂಪ್ಯೂಟರ್ ಸೆಟ್, ದ್ವಿತೀಯ ಸ್ಥಾನ ಪಡೆದವರಿಗೆ ಟ್ಯಾಬ್ (Tablet), ಮತ್ತು ತೃತೀಯ ಸ್ಥಾನ ಪಡೆದವರಿಗೆ ಸ್ಮಾರ್ಟ್ ವಾಚ್ ನೀಡಲಾಗುವುದು. ಹಾಗೆಯೇ ಕೋರ್ಸ್ ಮುಗಿದ ನಂತರ ಎಲ್ಲ 100 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಸಿಗುತ್ತದೆ. ಪರೀಕ್ಷೆಗೆ ಬರುವ ಪ್ರತಿಯೊಬ್ಬರಿಗೂ ಉಪಹಾರದ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ನಮ್ಮ ವಾಹಿನಿಯೊಂದಿಗೆ ಸುನೀಲ್ ವರ್ಣೇಕರ್ ಮಾತನಾಡಿದ್ದು ಹೀಗೆ.

Comments

Popular posts from this blog

ಕನಸಿಗೆ ಬಡತನದ ತಡೆಯಿಲ್ಲ: ಕಠಿಣ ಪರಿಶ್ರಮದಿಂದ ವೈದ್ಯಕೀಯ ಸೀಟ್ ಪಡೆದ ವಿಜಯ್ ಕರಿಕಟ್ಟಿ

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಬದುಕುಳಿವಿಗೆ ಆಗ್ರಹಿಸಿ ಜೆಡಿಎಸ್ ಪ್ರತಿಭಟನೆ, ಶ್ರೀ ಸುನಿಲ್ ವರ್ಣೇಕರ್ ಭಾಗಿ