ರೈತರ ಜಮೀನು ಕಬಳಿಕೆ ಖಂಡಿಸಿ ಜೆಡಿಎಸ್ ಪಾದಯಾತ್ರೆ: ಬೆಳಗಾವಿ ಜಿಲ್ಲೆಯ ಪರವಾಗಿ ಭಾಗಿಯಾದ ಜಿಲ್ಲಾಧ್ಯಕ್ಷ ಶಂಕರ ಭ ಮಾಡಲಗಿ
*ದಿನಾಂಕ 09-8-2026 ವಾರ ರವಿವಾರ*
ಬೆಂಗಳೂರಿನಲ್ಲಿ ಯುವ ಜನತಾದಳದ ಜಾತ್ಯತೀತ ಪಕ್ಷದ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ರಾಮನಗರ ಜಿಲ್ಲೆಯ ಬಿಡದಿ ಮತಕ್ಷೇತ್ರದಲ್ಲಿ ರೈತರ ಜಮೀನುಗಳನ್ನು ಸರ್ಕಾರ ಕಬಳಿಸುತ್ತಿರುವ ಖಂಡಿಸಿ ಸರ್ಕಾರದ ವಿರುದ್ಧ ಬೈರಮಂಗಲದಿಂದ ಬೆಂಗಳೂರು ಫ್ರೀಡಂ ಪಾರ್ಕ್ ದವರೆಗೆ ಬೃಹತ್ ಪ್ರತಿಭಟನಾ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದು ಈ ಮೊದಲನೆಯ ದಿನದ ಪ್ರತಿಭಟನೆಯಲ್ಲಿ ಜಾತ್ಯಾತೀತ ಜನತಾದಳ ಪಕ್ಷದ ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀ ಶಂಕರ ಭ ಮಾಡಲಗಿ ಯವರು ಬೆಳಗಾವಿ ಜಿಲ್ಲೆಯ ಪರವಾಗಿ ಭಾಗಿಯಾದ ಕ್ಷಣ*
*ಈ ಸಂದರ್ಭದಲ್ಲಿ ಪಕ್ಷದ ಶಾಸಕರು ಮತ್ತು ವಿಧಾನ ಪರಿಷತ್ತಿನ ಸದಸ್ಯರು ಲೋಕಸಭಾ ಸದಸ್ಯರು ಮತ್ತು ಮಾಜಿ ಸಚಿವರು ಮಾಜಿ ಶಾಸಕರು ಮಾಜಿ ವಿಧಾನ ಪರಿಷತ್ತಿನ ಸದಸ್ಯರು ಹಾಜರಿದ್ದರು*

Comments
Post a Comment