ಕೊಟ್ಟ ಮಾತಿನಂತೆ ಯರಗೊಪ್ಪ ಮಠದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ: ಶಾಸಕ ಬಾಬಾಸಾಹೇಬ ಪಾಟೀಲ
ದೇವರಕೊಂಡ ಚನ್ನವೃಷಬೇಂದ್ರ ಅಜ್ಜನ ಮಠದ ಅಭಿವೃದ್ದಿಗೆ ಸದ್ಭಕ್ತರ ಸಹಕಾರ
ಅಗತ್ಯವಾಗಿದೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಅವರು ಮಂಗಳವಾರ ಬೈಲಹೊಂಗಲ ಸಮೀಪದ ಕಿತ್ತೂರು ಮತಕ್ಷೇತ್ರದ ಯರಗೊಪ್ಪ ಗ್ರಾಮದ ಶ್ರೀ ಚನ್ನವೃಷಬೇಂದ್ರ ದೇವರಕೊಂಡ
ಅಜ್ಜನವರ ಲೀಲಾಮಠದಲ್ಲಿ ಪಂಚಾಯತ ರಾಜ್ಯ ಇಂಜನೀಯರಿಂಗ್ ಇಲಾಖೆ 2025-26 ನೇ ಸಾಲಿನ
ಲೆಕ್ಕ ಶೀರ್ಷಿಕೆ 54-52 ಟೂರಿಸಂ ಯೋಜನೆಯಡಿಯಲ್ಲಿ ಸುಮಾರು 50 ಲಕ್ಷ ರೂಪಾಯಿಗಳ
ಅನುಧಾನದಲ್ಲಿ ಯಾತ್ರಿ ನಿವಾಸ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ
ಮಾತನಾಡಿ, ನಾನು ಕೊಟ್ಟ ಮಾತಿನಂತೆ ಶ್ರೀಮಠದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ
ಸರಕಾರದಿಂದ ಅನುದಾನ ತಂದು ಶ್ರಮಿಸುತ್ತಿದ್ದು ಇನ್ನೂ ಹೆಚ್ಚಿನ ಅಭಿವೃದ್ದಿಗೆ ಮಠದ
ಸದ್ಭಕ್ತರು ತನು-ಮನ-ಧನ ಸಹಾಯ ಮಾಡಲು ಮುಂದೆ ಬರಬೇಕೆಂದು ಮನವಿ ಮಾಡಿದರು.
ದಿವ್ಯ ಸಾನಿಧ್ಯ ವಹಿಸಿದ ಲೀಲಾಮಠದ ನಿತ್ಯಾನಂದ (ಶಿವಪ್ಪಜ್ಜ) ಆಶೀರ್ವಚನ ನೀಡಿ
ಮಾತನಾಡಿ, ಶಾಸಕ ಬಾಬಾಸಾಹೇಬ ಪಾಟೀಲ ಅವರು ಶ್ರೀಮಠದ ಸದ್ಭಕ್ತರಾಗಿದ್ದು ಅವರ
ಪರಿಶ್ರಮದ ಅಂಗವಾಗಿ ಶ್ರೀಮಠದ ಅಭಿವೃದ್ದಿಗೆ ಸರಕಾರದಿಂದ 50 ಲಕ್ಷ ರೂಪಾಯಿಗಳ
ಅನುಧಾನದಲ್ಲಿ ಯಾತ್ರಿ ನಿವಾಸ ನಿರ್ಮಾಣಕ್ಕೆ ಭೂಮಿ ಪೂಜಾ ಕಾರ್ಯ ಕೈಗೊಂಡಿದ್ದು
ಶ್ಲಾಘಣೀಯವಾಗಿದೆ ಎಂದರು.
ಈ ಸಂದರ್ಭದಲ್ಲಿ ವೇ.ಮೂ.ಮಲ್ಲಿಕಾರ್ಜುನ ಹಿರೇಮಠ, ಜಕನಾಯ್ಕನಕೊಪ್ಪದ ದೇವರಕೊಂಡ
ಅಜ್ಜನವರ ಮಠದ ಮಾತೋಶ್ರೀ ಶಿವಲೀಲಾ ಅಮ್ಮನವರು, ಸುರೇಶ ಮುಳಕುರ, ವಕೀಲ ಬಿ.ಬಿ.
ಹುಲಮನಿ, ಮಲ್ಲಿಕಾರ್ಜುನ ಕಮತ, ರಾಯನಗೌಡ ಪಾಟೀಲ, ಮಲ್ಲಿಕಾರ್ಜುನ ಹಿರೇಮಠ, ನಿಂಗಣ್ಣ
ಅರಳಿಕಟ್ಟಿ, ಬಸವರಾಜ್ ನರೇಗಲ್ ಹಾಗೂ ಶ್ರೀಮಠದ ಸದ್ಭಕ್ತರು ಇದ್ದರು. ವಿವೇಕಾನಂದ ಹಲಕಿ ಸ್ವಾಗತಿಸಿ,
ವಂದಿಸಿದರು.
ಈ ಸಂದರ್ಭದಲ್ಲಿ ಶಾಸಕ ಬಾಬಾಸಾಹೇಬ ಪಾಟೀಲ ಅವರನ್ನು ಶ್ರೀಗಳ ಸಾನಿಧ್ಯದಲ್ಲಿ ಸತ್ಕರಿಸಲಾಯಿತು.

Comments
Post a Comment