ಸಾಮಾಜಿಕ ಸಮಾನತೆಯ ಹರಿಕಾರ ಡಿ. ದೇವರಾಜ ಅರಸು ಬಡವರ ಬಂಧು ಎಂದೆಂದಿಗೂ ಅಮರ


 ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ & ಮಹಾನಗರ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ ಗುರವಾರ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ನಡೆದ ಡಿ. ದೇವರಾಜ ಅರಸು 111 ನೇ ಜನ್ಮದಿನಾಚರಣೆ ಅದ್ದೂರಿಯಾಗಿ ಜರುಗಿತು. 

ಇದಕ್ಕೂ ಮುಂಚೆ ಕಾರ್ಯಕ್ರಮದಲ್ಲಿ ಅಪರ

ಜಿಲ್ಲಾಧಿಕಾರಿಗಳಾದ

ಭವ್ಯ ಮೆರವಣಿಗೆ ಕಾರ್ಯಕ್ರಮ: ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ದಿವಂಗತ ಡಿ.ದೇವರಾಜ ಅರಸು ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿಗಳಾದ ಮೊಹಮ್ಮದ ರೋಷನ್, ಬೆಳಗಾವಿ ಪೊಲೀಸ್ ಆಯುಕ್ತ ಗುಲಾಬ್ ರಾವ್ ಭೂಷಣ ಬೊರಸೆ, ಅವರು ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಿ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು.

ದಿವಂಗತ ಡಿ. ದೇವರಾಜ ಅರಸು ಅವರು ಅಧಿಕಾರವನ್ನು ಕೇವಲ ಆಡಳಿತಕ್ಕೆ ಸೀಮಿತಗೊಳಿಸದೆ ಸಮಾಜದ ಸುಧಾರಣೆಗೆ ಶ್ರಮಿಸಿದ ಬಡವರ ಬಂದು ಜನಪರ ನಾಯಕರಾಗಿದ್ದರು ಎಂದು ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ ಹೇಳಿದರು.

ಉಪನ್ಯಾಸಕರಾಗಿ ಆಗಮಿಸಿದ್ದ ಡಾ. ಪ್ರವೀಣಾ ಕೆಎಸ್ ಅವರು ಮಾತನಾಡಿ ನಾಡು ಕಂಡ ಶ್ರೇಷ್ಠ ಮುಖ್ಯಮಂತ್ರಿ ದೇವರಾಜ ಅರಸು ಕೇವಲ ಹೆಸರಿಗೆ ಮಾತ್ರವಲ್ಲದೆ ಸಾಮಾನ್ಯ ಜನರಿಗೆ ನಿಜವಾದ ಅರಸರಾಗಿದ್ದರು, ಸಮಾಜದಲ್ಲಿ ತುಳಿತಕ್ಕೆ ಒಳಗಾದ ಅನೇಕ ಜನರನ್ನು ಸುಧಾರಿಸಲು ಅನೇಕ ಸಾಮಾಜಿಕ ಸುಧಾರಣಾ ಕಾರ್ಯಗಳನ್ನು ಜಾರಿ ಮಾಡಿದಾರೆ ಎಂದರು.


ಡಿ.ದೇವರಾಜ ಅರಸು ಅವರು ಸೈನ್ಯಕ್ಕೆ ಸೇರಲು ಬಯಸಿದ ಅವರು ತಾಯಿಯ ಕಾರಣ ಪ್ರಜಾ ಸೇವೆಗೆ ಬಂದು ಚುನಾವಣೆಯಲ್ಲಿ ಮೈಸೂರು ಮಹಾರಾಜರ ಆಪ್ತರನ್ನು ಸೋಲಿಸಿ ಹುಣಸೂರು ಕ್ಷೇತ್ರದಿಂದ ಆರಿಸಿ ಬಂದ ಅವರು ಮರಳಿ ರಾಜಕೀಯದಲ್ಲಿ ಸೋಲನ್ನೇ ಕಾಣದ ವ್ಯಕ್ತಿಯಾಗಿದ್ದರು. ಹುಣಸೂರು ಕ್ಷೇತ್ರದಿಂದ ಜಯಿಸಿ ವಿವಿಧ ಇಲಾಖೆಗಳ ಸಚಿವರಾಗಿ ಕಾರ್ಯ ನಿರ್ವಹಿಸಿದ ಅರಸು ವರು 1972 ರಲ್ಲಿ ಮೊದಲ ಬಾರಿಗೆ ರಾಜ್ಯದ 8 ನೇ ಮುಖ್ಯ ಮಂತ್ರಿ ಆಗಿ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿದರು.

1973 ರಲ್ಲಿ ರಾಜ್ಯದ ಹೆಸರನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಿ ಅಖಂಡ ಕರ್ನಾಟಕದ ನಿರ್ಮಾತೃ ಆದರೂ, ಡಿ. ದೇವರಾಜ ಅರಸು ಅವರ ಸಾಧನೆಗಳಲ್ಲಿ ಪ್ರಮುಖವಾಗಿ ಭೂ ಸುಧಾರಣೆಯಲ್ಲಿ ಉಳುವವನೇ ಭೂಮಿಯ ಒಡೆಯ ಎಂಬ ಕಾಯಿದೆ ಜಾರಿಗೆ ತಂದು

ಕೆಲವರಲ್ಲಿ ಇದ್ದ ಭೂಮಿಯನ್ನು ಅನೇಕ ಕೂಲಿಗಾಗಿ ದುಡಿಯುವ ಬಡ ರೈತ ಕುಟುಂಬಗಳಿಗೆ ಸಿಗುವಂತೆ ಮಾಡಿದರು.

ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಗುರುತಿಸಲು 1972 ರಲ್ಲಿ ಎಲ್‌ಜಿ ಹಾವನೂರು ಅಧ್ಯಕ್ಷತೆಯಲ್ಲಿ ಹಿಂದುಳಿದ ವರ್ಗಗಳ ಆಯೋಗ ರಚನೆ ಮಾಡುವುದರ ಮೂಲಕ ರಾಜ್ಯದ ಹಿಂದುಳಿದ ಸಮುದಾಯಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲು ವೈಜ್ಞಾನಿಕ ನೆಲೆಯನ್ನು ಒದಗಿಸಿತು. ಜೀತ ಪದ್ಧತಿಯಿಂದ 65 ಸಾವಿರ ಜನರನ್ನು ಮುಕ್ತಿಗೊಳಿಸಿ, ದಲಿತರು ಸಮಾಜದಲ್ಲಿ ಸಮಾನತೆಯಿಂದ ಜೀವಿಸಲು ಅನುವು ಮಾಡಿಕೊಟ್ಟಂತಹ ಮಹನೀಯರು ಡಿ.ದೇವರಾಜ ಅರಸು ಎಂದು ಅವರ ಜೀನವ ಸಾಧನೆಗಳ ಕುರಿತು ವಿವರಿಸಿದರು.


ವಿಜಯಕುಮಾರ ಹೊನಕೇರಿ, ಸಮಾಜ ಕಲ್ಯಾಣ ಇಲಾಖೆಯು ಜಂಟಿ ನಿರ್ದೇಶಕ ರಾಮನಗೌಡ ಕನ್ನೊಳ್ಳಿ, ಜಿಲ್ಲಾ ಹಿಂದುಳಿದು ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಬಸವರಾಜ ಕುರಿಹುಲಿ, ಹಿರಿಯ ಕೆಎಎಸ್ ಅಧಿಕಾರಿ ರಾಜೇಶ್ವರಿ ಜೈನಾಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಂಜಂತ್ರಿ, ಸಮಾಜದ ಮುಖಂಡರಾದ ಅಪ್ಪುಗೋಳ ರಾಹುಲ್ ಕಾಂಬಳೆ, ಸಮಾಜದ ಗಣ್ಯರು ಸೇರಿದಂತೆ ವಿವಿಧಾ ವಸತಿ ನಿಲಯಗಳ ನಿಲಯ ಪಾಲಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಶಾಂತ ಮರಿಗೌಡರು ಪ್ರಾಸ್ತಾವಿಕವಾಗಿ ಮಾತನಾಡಿದರು.

Comments

Popular posts from this blog

ಕನಸಿಗೆ ಬಡತನದ ತಡೆಯಿಲ್ಲ: ಕಠಿಣ ಪರಿಶ್ರಮದಿಂದ ವೈದ್ಯಕೀಯ ಸೀಟ್ ಪಡೆದ ವಿಜಯ್ ಕರಿಕಟ್ಟಿ

ಶ್ರೀ ಸುನೀಲ ವಣೇಕರ್ ಸಹಾಯ ಹಸ್ತ: ಬೈಲಹೊಂಗಲದ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಕೋರ್ಸ್ ಜೊತೆಗೆ ಆಕರ್ಷಕ ಬಹುಮಾನಗಳು!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಬದುಕುಳಿವಿಗೆ ಆಗ್ರಹಿಸಿ ಜೆಡಿಎಸ್ ಪ್ರತಿಭಟನೆ, ಶ್ರೀ ಸುನಿಲ್ ವರ್ಣೇಕರ್ ಭಾಗಿ