ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಜರುಗಿದ ಸಮೂಹ ಗೀತ ಗಾಯನ ಸ್ಪರ್ಧೆ.

 ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಬೈಲಹೊಂಗಲ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಇದರ ಸಂಯುಕ್ತ ಆಶಯದಲ್ಲಿ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ 4 ಮತ್ತು ಬಿ ಆರ್ ಸಿ ಯಲ್ಲಿ *ತಾಲೂಕ ಹಂತದ ಸಮೂಹ ಗೀತ ಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು* ಬೈಲಹೊಂಗಲ ತಾಲೂಕಿನ ವಿವಿಧ ಶಾಲೆಗಳ ಶಾಲಾ ಹಂತದಲ್ಲಿ ಪ್ರಥಮ ಸ್ಥಾನ ಪಡೆದ ತಂಡಗಳು ತಾಲೂಕ ಹಂತದಲ್ಲಿ ಭಾಗವಹಿಸಿ ತಮ್ಮ ಗಾಯನವನ್ನು ಪ್ರಸ್ತುತಪಡಿಸಿದರು. ಕಪ್ಸ್ ಬುಲ್ ಬುಲ್, ಸ್ಕೌಟ್ಸ್ ಗೈಡ್ಸ್, ರೋವರ್ ಮತ್ತು ರೆಂಜರ ಮೂರು ವಿಭಾಗಗಳಲ್ಲಿ ತಾಲೂಕ ಹಂತದ ಸ್ಪರ್ಧೆಗಳನ್ನು ನಡೆಸಲಾಯಿತು. ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಸಾಹಿತಿಗಳು ಹಾಗೂ ಶಿಕ್ಷಕರ ಶ್ರೀ ಸಿದ್ದು ನೈಸರ್ಗಿ ಮತ್ತು ಸಂಗೀತ ವಿದ್ವಾಂಸ ಬಿ ಆರ್ ರಾಯನಾಯಕರ ಅವರು ಉದ್ಘಾಟಿಸಿದರು .ಮುಖ್ಯ ಅತಿಥಿಗಳಾಗಿ ಶ್ರೀಮತಿ ಆರ್ ಜೆ ಸಾಲಿ ಹಿರಿಯ ಶಿಕ್ಷಕಿಯರು ಭಾಗವಹಿಸಿದ್ದರು. ನಿರ್ಣಯಕರಾಗಿ ಶ್ರೀ ಬಿ ಆರ್ ರಾಯನಾಯ್ಕರ ಸಂಗೀತ ಶಿಕ್ಷಕರು ಮತ್ತು ವಿದ್ವಾಂಸರು ಹಾಗೂ ಸಂಗೀತ ಪಾಂಡಿತ್ಯವನ್ನು ಹೊಂದಿದ ಶ್ರೀ ಕುಮಾರ್ ಕಡೆಮನಿ ಮತ್ತು ಶ್ರೀ ವಿ.ಎಂ ಕುರಿ ಮತ್ತು ಶ್ರೀಮತಿ ಅರ್ಚನಾ ಕುಲಕರ್ಣಿ ಅವರು ನಿರ್ಣಾಯಕರಾಗಿ ಭಾಗವಹಿಸಿದ್ದರು. ಕಲ್ಪವೃಕ್ಷ ಶಾಲೆಯ ಬುಲ್ ಬುಲ್ ವಿದ್ಯಾರ್ಥಿನಿಯರು ಹಾಗೂ ಲಿಟಲ್ ಹಾರ್ಟ್ ಶಾಲೆಯ ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿಗಳು ಹಾಗೂ ಕೆ ಆರ್ ಸಿ ಎಸ್ ಪದವಿ ಕಾಲೇಜಿನ ವಿದ್ಯಾರ್ಥಿನಿಯರು ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾ ಹಂತಕ್ಕೆ ಆಯ್ಕೆ ಆಗಿದ್ದಾರೆ. ಪ್ರಶಸ್ತಿ ಪತ್ರಗಳನ್ನು ಮತ್ತು ನಗದು ಬಹುಮಾನವನ್ನು ವಿತರಣೆ ಮಾಡಿ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶ್ರೀ ರವಿ ಹಿರೇಮಠ ಮಾತನಾಡಿ ನಮ್ಮ ತಾಲೂಕಿನಿಂದ ಆಯ್ಕೆಯಾದ ವಿದ್ಯಾರ್ಥಿಗಳು ವಿಭಾಗ ಹಾಗೂ ರಾಜ್ಯಮಟ್ಟದಲ್ಲಿ ಬಹುಮಾನ ತರಬೇಕೆಂದು ಶುಭಾಶಯಗಳನ್ನು ಕೋರಿದರು. ಇ.ಸಿ ಓ ಮಹೇಶ್ವ ಯರಗಟ್ಟಿಯವರು ಮಾತಾಡಿ ತಾಲೂಕಿನ ಸ್ಕೌಟ್ ಮತ್ತು ಗೈಡ್ಸ್ ಶಾಲಾ ಹಂತದ ಘಟಕಗಳು ಅತ್ಯುತ್ತಮ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದು ಮಕ್ಕಳು ರಾಜ್ಯಮಟ್ಟದಲ್ಲಿ ಪ್ರತಿ ವರ್ಷವೂ ಮಿಂಚುತ್ತಿದ್ದಾರೆ . ರಾಜ್ಯಪಾಲರಿಂದ ಪುರಸ್ಕಾರ ಪಡೆಯುತ್ತಿದ್ದಾರೆ ಈ ವರ್ಷ ಅಂದಾಜು 38 ಮಕ್ಕಳು ರಾಜ್ಯಪಾಲಾರದ ತಾವರಚಂದ್ ಗೆಹ್ಲೋಟ್ ರವರಿಂದ ಪ್ರಶಸ್ತಿಗಳನ್ನು ಪಡೆದಿದ್ದಾರೆ ಎಂದರು. ವಿವಿಧ ಶಾಲೆಗಳ ಮಕ್ಕಳು ಮತ್ತು ಮಾರ್ಗದರ್ಶಿ ಶಿಕ್ಷಕರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ತಾಲೂಕ ಕಾರ್ಯದರ್ಶಿ ಅಜ್ಜಪ್ಪ ಅಂಗಡಿಯವರು ಸಂಘಟಿಸಿದರು. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಲಘು ಉಪಹಾರವನ್ನು ನೀಡಲಾಯಿತು. ಶ್ರೀ ಶ್ರೀಶೈಲ ಹಿರೇಮಠ ಇವರು ಎಲ್ಲರಿಗೂ ವಂದನೆಗಳು ಸಲ್ಲಿಸಿ ಕಾರ್ಯಕ್ರಮವನ್ನು ಮುಕ್ತಾಯ ಮಾಡಿದರು



Comments

Popular posts from this blog

ಕನಸಿಗೆ ಬಡತನದ ತಡೆಯಿಲ್ಲ: ಕಠಿಣ ಪರಿಶ್ರಮದಿಂದ ವೈದ್ಯಕೀಯ ಸೀಟ್ ಪಡೆದ ವಿಜಯ್ ಕರಿಕಟ್ಟಿ

ಶ್ರೀ ಸುನೀಲ ವಣೇಕರ್ ಸಹಾಯ ಹಸ್ತ: ಬೈಲಹೊಂಗಲದ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಕೋರ್ಸ್ ಜೊತೆಗೆ ಆಕರ್ಷಕ ಬಹುಮಾನಗಳು!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಬದುಕುಳಿವಿಗೆ ಆಗ್ರಹಿಸಿ ಜೆಡಿಎಸ್ ಪ್ರತಿಭಟನೆ, ಶ್ರೀ ಸುನಿಲ್ ವರ್ಣೇಕರ್ ಭಾಗಿ