ಪರೀಕ್ಷೆ ಬರೆದ 2 ಗಂಟೆಯೊಳಗೆ ರಿಸಲ್ಟ್ ಗ್ಯಾರಂಟಿ: ಬೈಲಹೊಂಗಲದಲ್ಲಿ ಬಡ ವಿದ್ಯಾರ್ಥಿಗಳಿಗೆ ಭರ್ಜರಿ ಬಂಪರ್!
ನನ್ನ ಜೀವನದ ಯಶಸ್ಸಿಗೆ ಗುರುಗಳೇ ಕಾರಣ. ಕಡು ಬಡತನದಿಂದ ಬೆಳೆದು ಬಂದಿರುವ ನನಗೆ ಗುರುಗಳ ಸತತ ಮಾರ್ಗದರ್ಶನ, ಪ್ರೇರಣೆ ಹಾಗೂ ಸಹಕಾರವೇ ಇಂದಿನ ಯಶಸ್ಸಿಗೆ ಕಾರಣವಾಗಿದೆ ಎಂದು ಜೆಡಿಎಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ಹಾಗೂ ಸಮಾಜ ಸೇವಕ ಸುನೀಲ ವರ್ಣೇಕರ ಹೇಳಿದರು.
ಬೈಲಹೊಂಗಲ ಪಟ್ಟಣದ ಬಾಪೂಜಿ ಡ್ರೀಮ್ಸ್ ವಿಜ್ಞಾನ ಪ.ಪೂ. ಮಹಾವಿದ್ಯಾಲಯದ ಸಾಧುನವರ ಕಾಂಪ್ಲೆಕ್ಸ್ನಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಸುನೀಲ ವರ್ಣೇಕರ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ 100 ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ತರಬೇತಿ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಸಮಾಜಕ್ಕೆ ಕೊಡುಗೆ ನೀಡಬೇಕೆಂಬ ಆಶಯದಿಂದ 100 ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಶಿಕ್ಷಣ ನೀಡುವ ಯೋಜನೆ ರೂಪಿಸಿ ಕಾರ್ಯರೂಪಕ್ಕೆ ತಂದಿದ್ದೇನೆ. ಕರ್ನಾಟಕದಾದ್ಯಂತ ಯಾವುದೇ ವಿದ್ಯಾರ್ಥಿಗೆ ಶಿಕ್ಷಣದ ಸಲುವಾಗಿ ತೊಂದರೆ ಎದುರಾದರೆ ಕೈಲಾದಷ್ಟು ಸಹಾಯ–ಸಹಕಾರ ನೀಡುವುದಾಗಿ ಹೇಳಿದರು.
ಯುನಿಕ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ 100 ವಿದ್ಯಾರ್ಥಿಗಳ ತರಬೇತಿಯ ಸಂಪೂರ್ಣ ವೆಚ್ಚವನ್ನು ತಾವೇ ಭರಿಸುವುದಾಗಿ ತಿಳಿಸಿದ ಅವರು, ಮುಂದಿನ ದಿನಗಳಲ್ಲಿ ಇನ್ನಷ್ಟು ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಶಿಕ್ಷಣ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ಧಾರ್ಮಿಕ ದತ್ತಿ ಇಲಾಖೆಯ ನಿರ್ದೇಶಕ ಡಾ. ಮಹಾಂತೇಶಶಾಸ್ತ್ರೀ ಅರಾದ್ರಿಮಠ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಉದ್ಯಮಿ ವಿಜಯ ಮೆಟಗುಡ್ಡ ಹಾಗೂ ಚಿತ್ರನಟ ಶಿವರಂಜನ್ ಬೋಳನ್ನವರ ಮಾತನಾಡಿ, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ಮೂಲಕ ಸುನೀಲ ವರ್ಣೇಕರ ಅವರು ಉತ್ತಮ ಸಮಾಜ ಸೇವೆ ಮಾಡುತ್ತಿದ್ದಾರೆ. ಕೊಡಗೈ ದಾನಿಯಾಗಿ ಸಮಾಜದ ಎಲ್ಲ ವರ್ಗದವರಿಗೆ ಸಹಾಯ–ಸಹಕಾರ ನೀಡುತ್ತಿರುವ ಅವರು ಇನ್ನೂ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಪ್ರವೇಶ ಪರೀಕ್ಷೆ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, 600ಕ್ಕೂ ಅಧಿಕ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಪರೀಕ್ಷೆ ಮುಗಿದ ಕೇವಲ ಎರಡು ಗಂಟೆಗಳಲ್ಲಿಯೇ ಫಲಿತಾಂಶ ಪ್ರಕಟಿಸಲಾಯಿತು.
ಆಯ್ಕೆಯಾದ 100 ವಿದ್ಯಾರ್ಥಿಗಳಿಗೆ ಸೆ.10ರಿಂ
ದ ಕಂಪ್ಯೂಟರ್ ತರಗತಿಗಳು ಆರಂಭವಾಗಲಿದ್ದು, ಕೋರ್ಸ್ ಪೂರ್ಣಗೊಂಡ ಬಳಿಕ ಪ್ರಮಾಣಪತ್ರ ವಿತರಿಸಲಾಗುವುದು. ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಮೂವರು ವಿದ್ಯಾರ್ಥಿಗಳಿಗೆ ವಿಶೇಷ ಬಹುಮಾನ ನೀಡಲಾಯಿತು. ಪ್ರಥಮ ಬಹುಮಾನವಾಗಿ ಕಂಪ್ಯೂಟರ್ ಸೆಟ್, ದ್ವಿತೀಯ ಬಹುಮಾನವಾಗಿ ಟ್ಯಾಬ್ ಹಾಗೂ ತೃತೀಯ ಬಹುಮಾನವಾಗಿ ಸ್ಮಾರ್ಟ್ ವಾಚ್ ವಿತರಿಸಲಾಯಿತು.
ಇದೇ ವೇಳೆ ಶಿಕ್ಷಕರಿಗೆ ಗಣ್ಯರಿಗೆ, ಪತ್ರಕರ್ತರಿಗೆ ಸತ್ಕರಿಸಲಾಯಿತು.
ಪ್ರಾಚಾರ್ಯ ಎಸ್.ವ್ಹಿ.ಕಾರಿಮನಿ ಸ್ವಾಗತಿಸಿದರು. ಬಾಬು ಖಂಡೊಜಿ ನಿರೂಪಿಸಿದರು. ಅಮೃತ ಹೊಸಮನಿ ವಂದಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು, ಸುನೀಲ ವರ್ಣೇಕರ ಪೌಂಡೇಶನ್ ಸದಸ್ಯರು ಇದ್ದರು.

Comments
Post a Comment